== ಆಟಿ ತಿಂಗಳು == ಆಟಿ ತಿಂಗಳು ತುಳುನಾಡಿನವರಿಗೆ ತುಂಬಾ ಕಷ್ಟಕರವಾದ ಕಾಲವಾಗಿತ್ತು. ಆದರೆ ಕಾಲಘಟ್ಟ ಬದಲಾಗಿ ಬಡತನ, ರೋಗರುಜಿನಗಳು ಕಡಿಮೆಯಾಗಿ, ತುಳುನಾಡು ಈಗ ತುಂಬಾ ಬದಲಾಗಿದೆ. ಆದರೂ ಹಿರಿಯೆರು ಪ್ರಾರಂಭಿಸಿದ ಆಟಿ ತಿಂಗಳ ಕೆಲವು ಕ್ರಮಗಳು ಈಗ ಕೂಡಾ ತುಳುಜನರು ಪಾಲನೆ ಮಾಡುತ್ತಾ ಇದ್ದಾರೆ. == ಆಟಿ ಹುಣ್ಣಿಮೆ == ತುಳುವರು ಆಟಿಯ ಅಮವಾಸ್ಸ್ಯೆಗೆ ಹಾಲೆ ಮರದ ಕೆತ್ತೆಯ ಕಶಾಯ ಕುಡಿತ್ತಾರೆ, ಈಶ್ವರ ದೇವಸ್ಥಾನದಲ್ಲಿ ತೀರ್ಥ ಸ್ನಾನ ಮಾಡುತ್ತಾರೆ.ನಾಗರ ಪಂಚಮಿ ಬಂದಾಗ ನಾಗನಿಗೆ ತನು(ಹಾಲು) ಹಾಕುತ್ತಾರೆ, ಹಾಗೆಯೇ ಆಟಿ ಹುಣ್ಣಿಮೆಗೆ ತಡ್ಯ ಪುಡ್ಯಾಡುನು ಅಥಾವಾ ಹೊಸ್ತಿಲು ಪೂಜೆ ಮಾಡುತ್ತಾರೆ. == ಹುರುಳಿ ಯ ಹೂವು ಅತೀ ಮುಖ್ಯವಾದ ವಸ್ತು == ಹುರುಳಿಯನ್ನು ನೀರಿನಲ್ಲಿ ಹಾಕಿ ಅದನ್ನು ಸ್ವಲ್ಪ ಸಮಯ ನೀರಿನಲ್ಲಿ ಇಟ್ಟು ಆ ಬಳಿಕ ಅದನ್ನು ಮಣ್ಣಿನಲ್ಲಿ ಹಾಕಿ ಅದಕ್ಕೆ ಮಣ್ಣಿನ ಮಡಕೆಯೊಂದನ್ನು ಮುಚ್ಚಿ ಇಟ್ಟು, ಆಟಿ ಹುಣ್ಣಿಮೆಯಲ್ಲಿ ಅದನ್ನು ತೆಗೆದು ನೋಡಿದರೆ ಹಳದಿ ಬಣ್ಣದ ಸೊಗಸಾದ ಹುರುಳಿಯ ಹೂವುಗಳು ಆಟಿ ಹುಣ್ಣಿಮೆಯ ಹೊಸ್ತಿಲು ಪೂಜೆಗೆ ಸಿದ್ಧವಾಗಿರುತ್ತದೆ. == ಆಟಿ ಹುಣ್ಣಿಮೆಯ ತಡ್ಯ ಪುಡ್ಯಾಡುನು ಅಥಾವ ಹೊಸ್ತಿಲು ಬರೆಯುವ ಕ್ರಮ == ತಡ್ಯ ಪುಡ್ಯಾಡುನು ಅಥಾವ ಹೊಸ್ತಿಲು ಪೂಜೆ ಅನ್ನುವುದು ತುಳುನಾಡಿನ ಆಟಿಯ ಹುಣ‍್ಣಿಮೆಯಲ್ಲಿ ಬರುವ ಅತೀ ಮುಖ್ಯವಾದ ಒಂದು ಆಚರಣೆ. ಹೊಸ್ತಿಲನ್ನು ಚೆನ್ನಾಗಿ ತೊಳೆದು , ಜೇಡಿ ಮಣ್ಣಿನಲ್ಲಿ ಹೊರಗೆ , ಒಳಗೆ ಸುಂದರವಾದ ರೇಖೆಯಲ್ಲಿ ರಂಗೋಲಿ ಬರೆಯುತ್ತಾರೆ. ಇದಕ್ಕೆ ಹೊಸ್ತಿಲು ಬರೆಯುದು ಎಂದೂ ಹೇಳುತ್ತಾರೆ. == ಆಟಿ ಹುಣ್ಣಿಮೆಯ ತಡ್ಯ ಪುಡ್ಯಾಡುನು ಅಥಾವ ಹೊಸ್ತಿಲು ಪೂಜೆಯ ಕ್ರಮ == ಹೊಸ್ತಿಲು ಬರೆದ ನಂತರ, ಸಿಧ್ಧವಾದ ಹುರುಳಿಯ ಹೂವನ್ನು ಎರಡೂ ಬದಿಯಲ್ಲಿ ಇಟ್ಟು ಅಲಂಕಾರ ಮಾಡುತ್ತಾರೆ. ಅಶ್ತು ಮಾತ್ರವಲ್ಲದೆ ಹಲಸಿನ ಬೀಜವನ್ನು ಬೇಯಿಸಿ, ಅವುಗಳನ್ನು ಹೊಸ್ತಿಲಿನ ಎರಡೂ ಬದಿಯಲ್ಲಿ ಇಟ್ಟು ಅದರ ಜೊತೆಗೆ ನೀರನ್ನು ಇಟ್ಟು ಹೊಸ್ತಿಲು ಪೂಜೆ ಮಾಡುತ್ತಾರೆ. == ಜಾನಪದವೋ ಅಥಾವ ವೈಧಿಕ ಕ್ರಮವೋ == ಆಟಿ ಹುಣ್ಣಿಮೆಯ ತಡ್ಯ ಪುಡ್ಯಾಡುನು ಅಥಾವ ಹೊಸ್ತಿಲು ಪೂಜೆ ಜಾನಪದವೋ ಅಥಾವ ವ್ಯಧಿಕ ಕ್ರಮವೋ ಎಂಬುದು ಸಾಮಾನ್ಯವಾಗಿ ಬರುವ ಪ್ರಶ್ನೆ. ಆದರೆ ಆಟಿ ಹುಣ್ಣಿಮೆಯ ತಡ್ಯ ಪುಡ್ಯಾಡುನು ಅಥಾವ ಹೊಸ್ತಿಲು ಪೂಜೆಗೆ ಉಪಯೋಗಿಸುವ ಸಮಸ್ತ ಸಾಮಾಗ್ರಿಗಳು ಪ್ರಾಕೃತಿಕವಾಗಿರುದರಿಂದ ಈ ಆಚರಣೆಯು ಜಾನಪದವಾಗಿರುತ್ತದೆ ಎಂದು ತುಳು ಜಾನಪದ ವಿದ್ವಾಂಸ ಕುಂಡಂತಾಯರು ಅಭಿಪ್ರಾಯ ಪಟ್ಟಿದ್ದಾರೆ. == ಉಲ್ಲೇಖಗಳು ==